Skip to content
Melo Podcasts Home
CategoriesLanguagesFollowing

Episode notes

ಕಾಡಿನಲ್ಲಿ ಆನೆ ಮರಿ ಒಂದು ಹುಟ್ಟಿತು . ಎಲ್ಲ ರೀತಿಯಲ್ಲೂ ಬೇರೆ ಆನೆಗಳ ಥರಾನೇ ಇದ್ದ ಆನೆ ಮರಿ ನೋಡೋಕೆ ಮಾತ್ರ ನೀಲಿ ಬಣ್ಣ ಇತ್ತು !. ಆ ಬಣ್ಣದ ಜತೆ ಕಾಡಿನಲ್ಲಿ ಬೇರೆ ಮರಿಗಳ ಜತೆ ಬೇರೆಯೋಕೆ ಈ ಆನೆ ಮರಿಗೆ ಸಾಧ್ಯ ಆಯಿತೇ ?

Kelirondu Katheya ಕೇಳಿರೊಂದು ಕಥೆಯ

by Kelirondu Katheya Team · Kannada · Kids & Family

Kannada Stories for children.

More from Kelirondu Katheya ಕೇಳಿರೊಂದು ಕಥೆಯ

  1. E136 · 19 Jul 2021 · 7 min

    Ep131 - ಬಣ್ಣದ ಪ್ರಾಣಿ

    ಮಕ್ಕಳೆಂದರೆ ಕುತೂಹಲ , ಕುತೂಹಲ ಅಂದರೆ ಮಕ್ಕಳು . ದುಬಾರಿಯಾದ ಆಟದ ಸಾಮಾನಿರಲಿ , ಮೂಲೆಯಲ್ಲಿ ಬಿದ್ದಿರೋ ಕಲ್ಲಿರಲಿ , ಮಕ್ಕಳಿಗೆ ಎಲ್ಲವೂ ಆಕರ್ಷಕ ಅಂತಲೇ ತೋರುತ್ತದೆ . ಒಮ್ಮೆ , ಶಾಲೆಯಲ್ಲಿ ಆಟ ಆಡ್ತಿದ್ದ ಮಕ್ಕಳಿಗೆ ಒಂದು ವಿಚಿತ್ರ ಪ್ರಾಣಿ ಕಣ್ಣಿಗೆ ಬಿತ್ತು . ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದ ಈ ಪ್ರಾಣಿಯು ಮಕ್ಕಳಿಗೆ ಆಟದ ಸಾಮಾನಿನ ತರಹ ತೋರಿತು . ಪ್ರಾಣಿಯನ್ನು ಮಕ್ಕಳು ಏನು ಮಾಡಿದರು ? ಬನ್ನಿ , ಈ ಕತೆಯಲ್ಲಿ ತಿಳಿಯೋಣ .

  2. E135 · 11 Jul 2021 · 9 min

    ಹನುಮಂತನ ಚಿಟಿಕೆ

    ಕಥೆಯ ಶೀರ್ಷಿಕೆ ವಿಚಿತ್ರ ಅನ್ನಿಸುತ್ತಾ ? ಹೌದು .. ರಾಮಾಯಣದ ಈ ಅಪರೂಪದ ಕತೆ ಕೇಳೋಕೆ ಬಹು ಮಜಾ . ಜತೆಗೆ , ಹನುಮಂತ ಹಾಗೂ ರಾಮನ ಗೆಳೆತನ ಎಷ್ಟು ಗಾಢವಾಗಿತ್ತು ಅನ್ನುವುದಕ್ಕೆ ಸಾಕ್ಷಿ ಕೂಡ .

  3. E134 · 4 Jul 2021 · 5 min

    ಕಾಗೆ ಮರಿ ಹಾಗೂ ಹಂಸದ ಕತೆ

    ಕಾಡಿನಲ್ಲಿ ವಾಸ ಆಗಿದ್ದ ಕಾಗೆ ಮರಿಗೆ ನೀರಿನಲ್ಲಿ ಈಜುತ್ತಿದ್ದ ಬೆಳ್ಳಗೆ ಸುಂದರವಾಗಿದ್ದ ಹಂಸವನ್ನ ಕಂಡಾಗ ಒಂಥರಾ ಅಸೂಯೆ ಆಯ್ತು . ಹಾಗೆ , ಸ್ವಲ್ಪ ಭಯ ಕೂಡ ಆಯ್ತು . ತಕ್ಷಣ ಅಮ್ಮನ ಬಳಿ ಹೋಗಿ , ಹೇಳಿದಾಗ , ಅಮ್ಮ ಹೇಳಿದ್ದೇನು ? ಆಗ ಕಾಗೆ ಮರಿಗೆ ಏನನ್ನಿಸಿತು ? ಸಂವಿತ್ ಫೌಂಡೇಶನ್ ಅವರ ಸಹಯೋಗದಲ್ಲಿ ಮಾಡಿದ ಈ ಪುಟ್ಟ ಕತೆ ಹೇಳುವ ನೀತಿ ಮಾತ್ರ ಬಹಳ ದೊಡ್ಡದು .

  4. E132 · 20 Jun 2021 · 7 min

    ಕೆಂಪು ಕಾರು - ಸೇವಾ ಮನೋಭಾವದ ಬಗ್ಗೆ ಒಂದು ಕತೆ

    ರಕ್ಷಿತ್ ಗೆ ಕಾರುಗಳು ಅಂದರೆ ತುಂಬಾ ಇಷ್ಟ. ಒಂದು ದಿವಸ ಅವನ ಅಮ್ಮ ಅವನಿಷ್ಟದ ಕೆಂಪು ಕಾರನ್ನ ಗೊತ್ತಿಲ್ಲದೇ ಬಡ ಮಕ್ಕಳಿಗೆ ದಾನ ಮಾಡಿದಾಗ ರಕ್ಷಿತ್ ಗೆ ಆದ ದುಃಖ ಅಷ್ಟಿಷ್ಟಲ್ಲ . ಆಗ ರಕ್ಷಿತ್ ಏನು ಮಾಡಿದ ? ಬನ್ನಿ ಈ ಕತೆ ಕೇಳಿ ತಿಳಿದುಕೊಳ್ಳೋಣ

  5. E131 · 6 Jun 2021 · 6 min

    ರೋಹಿತನ ಸಾಹಸ - ಒಂದು "ಸಾಹಸಮಯ" ಕತೆ

    ” ಕೇಳಿರೊಂದು ಕಥೆಯ ” ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು ಮಾಡಿದ್ದೆವು . ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ ಈ ವಾರದ ಕತೆ “ರೋಹಿತನ ಸಾಹಸ ” . ಹೊರಗೆ ಜೋರಾಗಿ ಬೀಳುತ್ತಿದ್ದ ಮಳೆಯಲ್ಲಿ ಯಾವುದೋ ಪ್ರಾಣಿ ಕೂಗುವ ಸದ್ದು ಕೇಳಿಸ್ತು . ಮನೆಯಲ್ಲಿ ಬೇಜಾರು ಮಾಡಿಕೊಂಡು ಕುಳಿತಿದ್ದ ರೋಹಿತ್ ಆಗ ಏನು ಮಾಡಿದ ? ಕೇಳಿ ಈ ರೋಚಕ ಕಥೆ

  6. E130 · 30 May 2021 · 6 min

    ಹೂದಾನಿ - ಧೈರ್ಯದ ಬಗ್ಗೆ ಒಂದು ಕತೆ

    " ಕೇಳಿರೊಂದು ಕಥೆಯ " ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು ಮಾಡಿದ್ದೆವು . ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ ಈ ವಾರದ ಕತೆ "ಹೂದಾನಿ " . ತೇಜಸ್ , ಅಂಕಿತ್ ಹಾಗೂ ದಿವ್ಯ ಮನೆಯಲ್ಲಿ ಆಟ ಆಡ್ತಿದ್ದಾಗ ಮನೆಯಲ್ಲಿದ್ದ ಹೂದಾನಿ ( Flower Vase ) ಬಿದ್ಧು ಹೋಗತ್ತೆ . ಆಗ , ಆ ಮಕ್ಕಳೇನು ಮಾಡಿದರು . ಕೇಳಿ ಈ ಕುತೂಹಲಕಾರಿ ಕಥೆ .

  7. E129 · 15 May 2021 · 2 min

    [summer of stories] - ಒಂಟೆಯ ಬಗ್ಗೆ ಮೂರು ವಿಷಯಗಳು

    ಮರಳುಗಾಡಿನಲ್ಲಿ ವಾಸ ಮಾಡೋ ಒಂಟೆ ಅಸಾಮಾನ್ಯ ಪ್ರಾಣಿ . ದಿನಗಟ್ಟಲೆ ನೀರಿಲ್ಲದೆ ಬಿಸಿಲಿನಲ್ಲಿ ಇರುವ ಶಕ್ತಿ ಇರುವ ಈ ಪ್ರಾಣಿಯ ಬಗ್ಗೆ ನಮ್ಮ ಪುಟಾಣಿ ಕೇಳಿಗಾರ್ತಿ ಪ್ರಖ್ಯಾ ಇನ್ನಷ್ಟು ವಿಷಯಗಳನ್ನು ಕಥೆಯ ರೂಪದಲ್ಲಿ ನಿರೂಪಿಸಿದ್ದಾಳೆ .

  8. E128 · 13 May 2021 · 5 min

    [special episode] - ಈದ್ ಹಬ್ಬ ಹಾಗೂ ರಂಜಾನ್ ವಿಶೇಷ

    ಈದ್ ಹಬ್ಬ ಮುಸಲ್ಮಾನರು ಆಚರಣೆ ಮಾಡುವ ಮಹತ್ವದ ಹಬ್ಬಗಳಲ್ಲೊಂದು . ರಂಜಾನ್ ತಿಂಗಳಲ್ಲಿ ಬರುವ ಈ ಹಬ್ಬದ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ !

  9. E127 · 9 May 2021 · 2 min

    [summerofstories] -Tanay narrating " ಪಾರಿವಾಳ ಮತ್ತು ಇರುವೆ"

    4 ವರ್ಷದ ಪುಟ್ಟ ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ ನಿರೂಪಿಸುವ " ಪಾರಿವಾಳ ಮತ್ತು ಇರುವೆಯ " ಕತೆ . ಇದರ ಮೂಲ ಕತೆ ಇಲ್ಲಿ ಕೇಳಬಹುದು - https://kelirondukatheya.org/ep95/

  10. E126 · 9 May 2021 · 6 min

    [summerofstories] - Tanay narrating ಮಿಸಾಕೋ ಮತ್ತು ಓನಿ

    4 ವರ್ಷದ ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ ನಿರೂಪಿಸಿರುವ "ಮಿಸಾಕೊ ಮತ್ತು ಓನಿ " " ಕತೆ . ಇದರ ಮೂಲ ಕಥೆ ಇಲ್ಲಿ ಕೇಳಬಹುದು - https://kelirondukatheya.org/misako-and-oni/

Every episode of Kelirondu Katheya ಕೇಳಿರೊಂದು ಕಥೆಯ →

Take it with you

The Melo app keeps playing with the screen off, works in the car and on your watch, wakes you to your station, and browses the whole catalogue offline. Free, no ads, no account.

Get it on Google Play