Season 2, Episode 1 · SatisHFaction Kannada Podcast from the US
ಪ್ರವೀಣ ಅವರ ಪರಿಕ್ರಮ ಮತ್ತು ಪರಾಕ್ರಮ!
28 Jan 2026 · 23 min
Episode notes
ಪ್ರವೀಣ ಅವರ ಪರಿಕ್ರಮ ಮತ್ತು ಪರಾಕ್ರಮ! ನನ್ನ ಸಹೋದ್ಯೋಗಿ, ಸ್ನೇಹಿತ ಮತ್ತು ಕನ್ನಡಿಗ ಪ್ರವೀಣ್ ವೆಂಕಟರಾಮು ಅವರ ಜೊತೆ ಒಂದು ಸಂಭಾಷಣೆ. ಅವರು ೨೦೨೫ರ ಬೇಸಿಗೆಯಲ್ಲಿ ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳ ಪರಿಕ್ರಮವನ್ನು ಯಶಸ್ವಿಯಾಗಿ ಮುಗಿಸಿ ಬಂದವರು. ಈ ಎಪಿಸೋಡ್‌ನಲ್ಲಿ, ಅವರ ಪರಿಕ್ರಮದ ತಯಾರಿ, ಅವರು ತಮ್ಮ ಗುರಿ ಸಾಧನೆಯಲ್ಲಿ ಅನುಭವಿಸಿದ ರೋಚಕತೆಯನ್ನ ಈ ಮೂಲಕ ಕೇಳೋಣ. ಸ್ಯಾಟಿಸ್‌ಫ಼್ಯಾಕ್ಷನ್, ಸೀಜ಼ನ್ ೨, ಎಪಿಸೋಡ್ ೧
Podcast
SatisHFaction Kannada Podcast from the US
Satish Hosanagara · Society & Culture · Kannada
The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community. #NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.
More from SatisHFaction Kannada Podcast from the US All episodes →
-
S2 · E23 · 10 Sep 2026 · 12 min
ನಮಗೆ ಕನ್ನಡ (ಏಕೆ) ಬೇಕು (edited)
ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ ಮಾತನಾಡುವುದಷ್ಟೇ ಅಲ್ಲ, ಅದರ ಮೂಲಕ ಉಸಿರಾಡುತ್ತೇವೆ ಕೂಡ!
-
S2 · E22 · 10 Sep 2026 · 12 min
ನಮಗೆ ಕನ್ನಡ (ಏಕೆ) ಬೇಕು
ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ ಮಾತನಾಡುವುದಷ್ಟೇ ಅಲ್ಲ, ಅದರ ಮೂಲಕ ಉಸಿರಾಡುತ್ತೇವೆ ಕೂಡ!
-
S2 · E4 · 22 Apr 2026 · 14 min
ಸ್ವದೇಶ - ವಿದೇಶ
ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದು ಅಲ್ಲಿಯವರಾಗಿ ಹೋಗೋದು, ಒಂದು ರೀತಿಯ ಕಹಿ-ಸಿಹಿ ಅನುಭವ ಅನ್ನಬಹುದು. ನಾವು ತೊಂಬತ್ತರ ದಶಕದ ಕೊನೆಯಲ್ಲಿ ಬಂದಂತಹ ಟೆಕ್ನಿಕಲ್ ಕೂಸುಗಳು. ಆಗ, ನಾವು ಬಂದ ಹೊಸದರಲ್ಲಿ, ಯಾವುದಾದರೂ ಕನ್ನಡ ಸಂಘದ ಸಮಾರಂಭಕ್ಕೆ ಹೋದಾಗಲೆಲ್ಲ, ಅಲ್ಲಿ ಮಾತಿಗೆ ಸಿಗುತ್ತಿದ್ದ ಹಿರಿಯರು, "ನಾವು ಬಂದು ೨೫ ವರ್ಷಗಳ ಮೇಲಾಯ್ತು..." ಎಂದು ಹೇಳಿದಾಗಲೆಲ್ಲ, ನಮಗೆಲ್ಲ ಆಶ್ಚರ್ಯ, ವಿಸ್ಮಯ, ಜೊತೆಗೆ ಒಂದು ರೀತಿಯ ಗೊಂದಲ ಕೂಡ ಆಗ್ತಾ ಇತ್ತು. ನಮ್ಮ ಜನರೇಶನ್ನಿನವರು ಏನಿದ್ರೂ ಟೆಕ್ನಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬಂದವರು, ಆದ್ದರಿಂದ ಈ ದೇಶದಲ್ಲಿ ನಾವು ನೋಡಿದ ಕಡಿಮೆ ಹಣ ಎಂದರೆ ಮೂರು ಸಾವಿರ ಡಾಲರುಗಳಷ್ಟು. ಇಲ್ಲಿ ವಿದ್ಯಾರ್ಥಿಗಳಾಗಿ, ವ್ಯಾಸಂಗ ಮತ್ತು ಸಂಶೋಧನೆ ಮಾಡಲು ಬಂದವರ…
-
S2 · E3 · 1 Apr 2026 · 12 min
ನಾನೇಕೆ ಓದುತ್ತೇನೆ?
ಎಲ್ಲರೂ ನಾನೇಕೆ ಬರೆಯುತ್ತೇನೆ ಅನ್ನೋ ಸ್ವವಿಮರ್ಶೆಯಲ್ಲಿ ತೊಡಗಿರುವಾಗ, ನನಗೇಕೆ ಈ ರೀತಿಯ ಆಲೋಚನೆ ಬಂತು ಅಂತ ಯೋಚಿಸಿಕೊಳ್ಳುತ್ತಾ ಹೋದ ಹಾಗೆ, ಅನೇಕ ಗಹನವಾದ ವಿಷಯಗಳು ಹೊರಬಂದವು. ಅದನ್ನು, ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಂಡರೆ ಹೇಗೆ ಎನ್ನಿಸಿದ್ದರಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ. ಯಾವುದೇ ಒಂದು ಸಮಾಜದಲ್ಲಿ, ನೂರಕ್ಕೆ ಎಷ್ಟು ಜನ ಕ್ರಿಯೇಟಿವ್ ಆಗಿ ಯೋಚಿಸುತ್ತಾರೆ, ಎಷ್ಟು ಜನ ನಿಜವಾಗಿಯೂ ಬರೆಯುತ್ತಾರೆ, ಎಷ್ಟು ಜನ ಅವುಗಳನ್ನು ಓದುತ್ತಾರೆ ಎಂದುಕೊಂಡರೆ ನಿಮಗೆ ಆಶ್ಚರ್ಯವಾಗುತ್ತದೆ. ನೂರು ವರ್ಷಗಳ ಇತಿಹಾಸವನ್ನು ಅಧ್ಯಯನ ಮಾಡಿದರೆ, ಒಂದು ಕಾಲದಲ್ಲಿ ಬರೀ ಪ್ರಿಂಟ್ ಮತ್ತು ರೇಡಿಯೋ ಮಾಧ್ಯಮಕ್ಕೆ ಮೀಸಲಾದ ಜನ ಮತ್ತು ಬರಹಗಾರರು, ನೂರು ವರ್ಷಗಳಲ್ಲಿ ಅದೆಷ್ಟೋ ಪಟ್ಟು ಹೆಚ್ಚಿನ ಮಟ್ಟದಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಆಗಿ…
-
S2 · E2 · 25 Feb 2026 · 11 min
AI Agents are here! Now What?!
AI Agents are here! Now What?! ಆರ್ಟಿಫ಼ಿಷಿಯಲ್ ಇನ್ಟೆಲಿಜೆನ್ಸ್ ಬಂದ್ರೆ, ನಮ್ ಕಥೆ ಏನು? ಈ ಕೃತಕ ಬುದ್ಧಿಮತ್ತೆಯ ಏಜೆಂಟುಗಳಿಂದ ಮುಂದೆ ನಮಗೆಲ್ಲ ಏನೇನು ಕಾದಿದೆ ಎಂದು ಊಹಿಸಿಕೊಳ್ಳುವ ಚಿತ್ರಣ.
-
30 Dec 2025 · 12 min
Season 1 Final Episode (88)
Season 1 Final Episode (88) ಸ್ಯಾಟಿಸ್‌ಫ಼್ಯಾಕ್ಷನ್‌ನಿಂದ ನಾನು ಕಲಿತ ಪಾಠ! ಯಾವುದೋ ಒಂದು ಕಾಲದಲ್ಲಿ ಶುರು ಮಾಡಬೇಕಾಗಿದ್ದ ಪಾಡ್‌ಕ್ಯಾಸ್ಟ್ ಅನ್ನು ನಾನು ಶುರು ಮಾಡಿದ್ದು, 2025 ರ ಜನವರಿಯಲ್ಲಿ. ಈ ಪಾಡ್‌ಕ್ಯಾಸ್ಟ್ ಅಂದ್ರೆ ಅದು ಒಂದು ಥರದ expression ಅಷ್ಟೇನೆ. ನಮ್ಮ ನಮ್ಮ ಸಂತೋಷವನ್ನು ಅರಿಸಿ ಹೇಗೆ ನಾವು content ಹುಡುಕಿಕೊಂಡು ಹೋಗ್ತೀವಲ್ಲ. ಹಾಗೇ! ಇದೂ ಕೂಡ ನಮ್ಮ ನಮ್ಮ ದೈನಂದಿನ ಅಗತ್ಯಗಳಲ್ಲಿ ಒಂದು ಅನ್ನಬೇಕು ಅಷ್ಟೇ. Total episodes 88. Ordent fans (listeners) about 25-30 Most of the audience are from USA and India, listeners from Canada, Brazil and UK are about 2%. but I do thank the people from 26 other countries, who are around 1% of the audience.…
-
S1 · E87 · 17 Dec 2025 · 12 min
Getting used to AI Agents!
Getting used to AI Agents! ಇದ್ದಕ್ಕಿದ್ದ ಹಾಗೆ ನಮ್ಮ ಮನೆ ಮಾರ್ಗೇಜ್ ಕಂಪನಿಯವರಿಂದ ಒಂದು ಇ-ಮೇಲ್ ಬಂತು. ಅದರಲ್ಲಿ, ಈಗ ನೀವು home insurance ಕೊಡ್ತಾ ಇರೋದು ಬಹಳ ಹೆಚ್ಚಿದೆ. ನಾವು ಒಬ್ಬ ಪಾರ್ಟ್‌ನರ್ ಜೊತೆಗೆ ಸೇರಿ ಅದನ್ನ ಕಡಿಮೆ ಮಾಡಿಸ್ತಾ ಇದ್ದೇವೆ. ಇಲ್ಲಿ ಕ್ಲಿಕ್ ಮಾಡಿ ಅಂತ ಇತ್ತು. ಸ್ಪಾಮ್ ಅಲ್ಲ, ಫ಼ಿಶಿಂಗ್ ಅಲ್ಲ ಅಂತ ಕನ್‌ಫ಼ರ್ಮ್ ಮಾಡ್ಕೊಂಡು ನೋಡಿದ್ರೆ. ವೆರಿಫ಼ಿಕೇಶನ್‌ಗೆ ನಿಮ್ಮ ಫ಼ೋನ್ ನಂಬರ್ ಕೊಡಿ... ಅಂತ ಒಂದು ಗಾಳ ಇಟ್ಟಿದ್ದ್ರು. ಆಗ ನನಗೆ ಅನ್ನಿಸ್ತು, ಇದು ಎಲ್ಲಿಗೆ ಹೋಗ್ತಾ ಇದೆ ಅಂತ. ಆದದ್ದಾಗಲಿ, ಫ಼ೋನ್ ನಂಬರ್ ಹಾಕಿ ನೋಡೋಣ ಅಂದುಕೊಂಡ್ರೆ, ಅಲ್ಲಿ ಆಗಿದ್ದೇ ಬೇರೆ....
-
S1 · E86 · 26 Nov 2025 · 10 min
ಎಷ್ಟು ದುಡ್ಡು ಇದ್ರೆ ಒಳ್ಳೇದು? (86)
ಎಷ್ಟು ದುಡ್ಡು ಇದ್ರೆ ಒಳ್ಳೇದು? ಈಗೆಲ್ಲ ಅಮೇರಿಕದಲ್ಲಿ ದೊಡ್ಡ ದೊಡ್ಡ ಕಂಪನಿಗಳು, ಕಾಸ್ಟ್ ಕಟ್ಟಿಂಗ್ ಅನ್ನೋ ಹೆಸರಿನಲ್ಲಿ ಸಾವಿರಾರು ಜನರನ್ನು ಮನೆಗೆ ಕಳಿಸೋದನ್ನ ನೋಡಿದ್ರೆ, ಅಮೇರಿಕದ ಎಂಪ್ಲಾಯ್‌ಮೆಂಟ್ ಸಿಚುವೇಶನ್ ಬದಲಾಗುತ್ತೋ ಇಲ್ಲವೋ ಅನ್ನೋ ಸಂಶಯ ಬರುತ್ತೆ. ನಮ್ಮ ಕಂಪನಿ ಒಂದರಲ್ಲೇ ಸುಮಾರು 13 ಸಾವಿರ ಜನರು ಒಂದೇ ಕಳೆದುಕೊಳ್ಳಬೇಕಾಗಿ ಬಂದಾಗ ಅವರನ್ನೆಲ್ಲ ನೆನೆದು ಒಂದು ಸರತಿ ಕರುಳು ಚುರುಕು ಅಂತು. ಮತ್ತೆ ಮರುಕ್ಷಣ, ಇದೆಲ್ಲ ಕ್ಯಾಪಿಟಲಿಸಮ್ಮಿನ ಲೀಲೆ. ಇಲ್ಲಿ ಯಾರೂ ಯಾವತ್ತೂ ಶಾಶ್ವತರಲ್ಲ, ಯಾರು indispensible ಅಲ್ಲ, ಅನ್ನೋ ಮಾತು ಕೂಡಾ ನೆನಪಿಗೆ ಬಂತು. ಕೆಲಸ ಕಳೆದುಕೊಂಡವರಿಗೆ, ಆಯಾ ಕಂಪನಿಗಳಲ್ಲಿ, ಅವರವರ ಸರ್ವೀಸಿಗೆ ಸಂಬಂಧ ಪಟ್ಟಂತೆ ಒಂದಿಷ್ಟು severence ಬರುತ್ತೆ. ಆದ್ರೆ, ಎಲ್ಲ ಕಂಪನಿಗಳಲ್ಲೂ ಹಾಗೇ ಬರುತ್ತೆ ಅಂತ…
-
S1 · E85 · 18 Nov 2025 · 11 min
ಕೆಲಸ: ಕ್ಯಾಪಿಟಲಿಸ್ಟಿಕ್ ಪ್ರಪಂಚದ ಭೂತ
ಕೆಲಸ ಎಂಬ ಕ್ಯಾಪಿಟಲಿಸ್ಟಿಕ್ ಪ್ರಪಂಚದ ಭೂತ ನಮ್ಮ ಮನೆ ಹತ್ರ ಇರೋ ಒಬ್ಬ ಕಾರ್ ಮೆಕ್ಯಾನಿಕ್ ಹತ್ರ ಮಾತಾಡ್ತಾ ಇದ್ದೆ. ಪರಿಚಯ ಮಾಡಿಕೊಳ್ಳುತ್ತಾ ನೀನು ಎಲ್ಲಿ ಕೆಲ್ಸ ಮಾಡ್ತೀಯಾ, ಹೇಗೆ ಅಂತ ಕೇಳಿದ. ಅದಕ್ಕೆ ನಾನು ಟೆಕ್ನಾಲಜಿಯಲ್ಲಿ ಒಂದು ದೊಡ್ಡ ಕಂಪನಿಯಲ್ಲಿ ಕೆಲ್ಸ ಮಾಡ್ತೀನಿ ಅಂತ ಅಂದ್ರೆ. ಅವನು, ಇತ್ತೀಚೆಗೆ ಮಾಸ್ ಲೇ ಆಫ಼್ ಆಗಿರೋ ನ್ಯೂಸ್ ಅನ್ನು ಕೋಟ್ ಮಾಡಿ, ಅದು ಹೇಗೆ ಕೆಲ್ಸ ಮಾಡ್ತೀರೋ? ಅಂತ ಆಶ್ಚರ್ಯ ವ್ಯಕ್ತ ಪಡಿಸಿದ. ನನಗೆ ಆಗಲೇ ಅನ್ನಿಸಿದ್ದು, ಹೌದು, ನಮ್ಮ ಕೆಲಸ ಇದೆ/ಇಲ್ಲ ಎನ್ನುವ ಯಾವ ಗ್ಯಾರಂಟಿ ಅಂತೂ ಇಲ್ಲ.
-
S1 · E86 · 8 Nov 2025 · 10 min
ನಮ್ಮ (ನಮ್ಮ) ಭಾಷೆ ನಮ್ಮದು! (86)
Global Language Landscape Total living languages : 7,164 (Ethnologue, 2025) Languages with writing systems : 3,661 — These are considered “full-fledged” for reading, writing, and speaking. Languages without writing systems : 719 — These are oral languages used only in speech. Uncertain writing status : 2,586 — These may be partially documented or used in limited literacy contexts. This diversity reflects not just linguistic complexity but also cultural, geographic, and historical factors. Philosophical Reflection Language isn’t just a tool—it’s a mirror of human consciousness. The…
