Episode 118 · Kelirondu Katheya ಕೇಳಿರೊಂದು ಕಥೆಯ
Ep114 - [ ವ್ಯಕ್ತಿ ಪರಿಚಯ ] - ಅನಂತ್ ಪೈ
21 Feb 2021 · 7 min
Episode 118 · Kelirondu Katheya ಕೇಳಿರೊಂದು ಕಥೆಯ
21 Feb 2021 · 7 min
" ವ್ಯಕ್ತಿ ಪರಿಚಯ " ಸರಣಿಯಲ್ಲಿ ಮುಂದುವರೆಯುತ್ತಾ ಈ ಸಲ ಕನ್ನಡಿಗ ಅನಂತ್ ಪೈ ಅವರ ಬಗ್ಗೆ ತಿಳಿದುಕೊಳ್ತಿದ್ದೇವೆ . ಭಾರತೀಯ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಸ್ವಲ್ಪ ಕೊರತೆಯೇ . ಅದರಲ್ಲೂ ಪುರಾಣ ಕತೆಗಳನ್ನು ಬಿಟ್ಟರೆ , ಆಧುನಿಕ ಸಾಹಿತ್ಯದಲ್ಲಿ Easy Reading ಆಗಿರುವ ಮಕ್ಕಳ ಸಾಹಿತ್ಯ ಅತಿ ಕಡಿಮೆ ಅಂತಲೇ ಹೇಳಬೇಕು . ಈ ಕೊರತೆ ಮನಗಂಡ ಪೈ ಅವರ ಕೊಡುಗೆ ಭಾರತೀಯ ಮಕ್ಕಳ ಸಾಹಿತ್ಯಕ್ಕೆ ವಿನೂತನ .
by Kelirondu Katheya Team · Kannada · Kids & Family
Kannada Stories for children.
E121 · 10 Apr 2021 · 4 min
3 ವರ್ಷದ ವಿಹಾ ( Viha Nithundila ) ನಿರೂಪಿಸಿರುವ ". Rooster Raga ಅನ್ನುವ ಮುದ್ದಾದ ಕತೆ . ಕತೆಯ ಜತೆ ತಂದೆ ತಾಯಿಗಳು ಕೊಟ್ಟಿರುವ Background ಸಂಗೀತ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ .
E120 · 28 Mar 2021 · 13 min
ಈ ಸಲದ ವಿಶೇಷ ವ್ಯಕ್ತಿ , ಕನ್ನಡತಿ , ಬಾಹ್ಯಾಕಾಶ ವಿಜ್ಞಾನಿ ಶ್ರೀಮತಿ ಬಿ. ಪಿ . ದಾಕ್ಷಾಯಿಣಿ . ಮಂಗಳ ಗ್ರಹದ ಬಗ್ಗೆ ಸಂಶೋಧನೆ ಮಾಡಲು 2014ರಲ್ಲಿ ಭಾರತದ ವಿಜ್ಞಾನಿಗಳು ತಯಾರಿಸಿ, ಹಾರಿಸಿದ ಉಪಗ್ರಹದ ಹೆಸರು "ಮಂಗಳಯಾನ". ಈ ಮಹತ್ಸಾಧನೆಯ ಹಿಂದೆ ಇದ್ದ ಪ್ರಮುಖ ವಿಜ್ಞಾನಿಗಳಲ್ಲಿ ಶ್ರೀಮತಿ . ಬಿ ಪಿ ದಾಕ್ಷಾಯಿಣಿ ಅವರು ಕೂಡ ಒಬ್ಬರು . ಈ ಕಂತಿನ ಇನ್ನೊಂದು ವಿಶೇಷ ಅಂದರೆ , ದಾಕ್ಷಾಯಿಣಿ ಅವರ ಜತೆ ಮಾತನಾಡುವ ಅವಕಾಶ ಸಿಕ್ಕಿದ್ದು . ಅವರ ದನಿಯಲ್ಲಿ , ಅವರ ಬಾಲ್ಯ , ಓದು , ನೌಕರಿ , ಅವರ ಹವ್ಯಾಸಗಳು ಇವೆಲ್ಲದರ ಬಗ್ಗೆ ತಿಳಿಯುವ ಅವಕಾಶ ಸಿಕ್ಕಿದ್ದು ಸಂತಸದ ಸಂಗತಿ . ಅಶ್ವಿನಿ ಅವರ ದನಿಯಲ್ಲಿ ಮೂಡಿರುವ ಈ ಕಂತಿನಲ್ಲಿ , ದಾಕ್ಷಾಯಿಣಿ ಅವರ ಕೆಲವು ಮಾತಿನ ತುಣುಕುಗಳನ್ನೂ ಸೇರಿಸಲಾಗಿದೆ . ಕೇಳಿ .
E119 · 7 Mar 2021 · 8 min
"ವ್ಯಕ್ತಿ ಪರಿಚಯ " ಸರಣಿಯಲ್ಲಿ ಈ ಸಲದ ಪರಿಚಯ "ಹೆಲೆನ್ ಕೆಲ್ಲೆರ್ ". ಹೆಲೆನ್ ಕೆಲ್ಲೆರ್ , ಅತಿ ವಿಶಿಷ್ಟ ಮಹಿಳೆ . ಕಣ್ಣು , ಕಿವಿ ಕೇಳದೆ ಇದ್ದರೂ ಬಾಯಿ , ಹಾಗೂ ಸ್ಪರ್ಶದ ( Touch ) ಸಹಾಯದಿಂದ ಕಾಲೇಜು ಶಿಕ್ಷಣ ಪಡೆದವರು . ನಂತರ , ಪ್ರಪಂಚದಾದ್ಯಂತ ಲಕ್ಷಾಂತರ ಅಂಗವಿಕಲರಿಗೆ ಸ್ಪೂರ್ತಿಯಾಗಿ ನಿಂತವರು . ಇವರ ಜೀವನದ ರೋಚಕ ಕತೆ , ಈ ಸಲ "ಕೇಳಿರೊಂದು ಕತೆಯಾ " ದಲ್ಲಿ .
E117 · 14 Feb 2021 · 11 min
ಲುಡ್ವಿಗ್ ವ್ಯಾನ್ ಬೀಥೋವನ್ ( Ludwig Van Beethoven) , Western Classical ಸಂಗೀತದಲ್ಲಿ ಅತಿ ದೊಡ್ಡ ಹೆಸರು . ಕರ್ನಾಟಕ ಸಂಗೀತದಲ್ಲಿ ಪುರಂದರ ದಾಸರು ಹೇಗೋ , ವಿಶ್ವ ಸಂಗೀತ ಕ್ಷೇತ್ರದಲ್ಲಿ ಬಿಥೋವನ್ ಕೂಡ . ಕ್ಲಾಸಿಕಲ್ ಸಂಗೀತ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯ ಮಹದಾಸೆ ಬಿಥೋವನ್ ಅವರ ಸಿಂಫೊನಿ ಗಳಲ್ಲಿ ನುಡಿಸಬೇಕು ಅನ್ನುವುದು . ಅತ್ಯುತ್ತಮ Composer ಆಗಿದ್ದ ಬೀಥೋವನ್ ಕಿವುಡ ಹಾಗೂ ಮೂಕನಾಗಿದ್ದ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ? ಈ ವಾರದ "ವ್ಯಕ್ತಿ ಪರಿಚಯ " ಸರಣಿಯಲ್ಲಿ ಬೀಥೋವನ್ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ . ಬೀಥೋವನ್ ಅವರ ಇನ್ನೂ ಕೆಲವು ಚಿತ್ರಗಳು , ಹಾಗೂ ಅವರ ಸಂಗೀತದ ತುಣುಕುಗಳನ್ನು ನಮ್ಮ ವೆಬ್ಸೈಟ್ https://kelirondukatheya.org/ep113 ರಲ್ಲಿ ನೋಡಬಹುದು .
E116 · 7 Feb 2021 · 6 min
"ವ್ಯಕ್ತಿ ಪರಿಚಯ " ಸರಣಿಯ ಮೊದಲನೇ ಕಂತು . ಪ್ರಸಿದ್ಧ ವ್ಯಕ್ತಿಗಳ ಜೀವನದ ತುಣುಕುಗಳನ್ನು ಮಕ್ಕಳಿಗೆ ಅವರದೇ ರೀತಿಯಲ್ಲಿ ತಿಳಿ ಹೇಳುವ ಪ್ರಯತ್ನ ಇದು . ಈ ಸಲದ ವ್ಯಕ್ತಿ ಪ್ರಪಂಚದೆಲ್ಲೆಡೆ "Confident Mary " ಅಂತಲೇ ಕರೆಸಿಕೊಂಡ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ . ಮೇರಿ ಬಾಕ್ಸಿಂಗ್ ನಲ್ಲಿ ಎಷ್ಟು ಪ್ರಸಿದ್ದರೋ ಅವರ ಹಿನ್ನಲೆ ಕೂಡ ಅಷ್ಟೇ ರೋಚಕವಾದದ್ದು . http://kelirondukatheya.org/stories/ep112 ರಲ್ಲಿ ಮೇರಿ ಅವರ ಕೆಲವು ಚಿತ್ರಗಳನ್ನೂ , ಅವರ ಬಗ್ಗೆ ಇನ್ನೂ ಕೆಲವು ವಿಷಯಗಳನ್ನು ತಿಳಿದುಕೊಳ್ಳಬಹುದು .
E115 · 24 Jan 2021 · 5 min
ಸೂರ್ಯ ಚಂದ್ರರು ಒಂದು ಕಾಲದಲ್ಲಿ ನಮ್ಮ ನಿಮ್ಮ ಥರ ಭೂಮಿಯ ಮೇಲೆ ಇದ್ರಂತೆ . ! . ಆಶ್ಚರ್ಯ ಆಗುತ್ತಲ್ಲಾ ? ಹೌದು , ಸೂರ್ಯ ಚಂದ್ರರು ಮನುಷ್ಯರ ಥರ ಮನೆಯಲ್ಲಿ ಇರ್ತಿದ್ರು ಅಂತ ಆಫ್ರಿಕನ್ನರು ನಂಬುತ್ತಾರಂತೆ . ಹಾಗಾದ್ರೆ , ಈಗ್ಯಾಕೆ ಆಕಾಶದಲ್ಲಿ ಇರ್ತಾರೆ ? ತಿಳಿಯೋಕೆ , ಈ ಕತೆ ಕೇಳಿ .
E136 · 19 Jul 2021 · 7 min
ಮಕ್ಕಳೆಂದರೆ ಕುತೂಹಲ , ಕುತೂಹಲ ಅಂದರೆ ಮಕ್ಕಳು . ದುಬಾರಿಯಾದ ಆಟದ ಸಾಮಾನಿರಲಿ , ಮೂಲೆಯಲ್ಲಿ ಬಿದ್ದಿರೋ ಕಲ್ಲಿರಲಿ , ಮಕ್ಕಳಿಗೆ ಎಲ್ಲವೂ ಆಕರ್ಷಕ ಅಂತಲೇ ತೋರುತ್ತದೆ . ಒಮ್ಮೆ , ಶಾಲೆಯಲ್ಲಿ ಆಟ ಆಡ್ತಿದ್ದ ಮಕ್ಕಳಿಗೆ ಒಂದು ವಿಚಿತ್ರ ಪ್ರಾಣಿ ಕಣ್ಣಿಗೆ ಬಿತ್ತು . ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದ ಈ ಪ್ರಾಣಿಯು ಮಕ್ಕಳಿಗೆ ಆಟದ ಸಾಮಾನಿನ ತರಹ ತೋರಿತು . ಪ್ರಾಣಿಯನ್ನು ಮಕ್ಕಳು ಏನು ಮಾಡಿದರು ? ಬನ್ನಿ , ಈ ಕತೆಯಲ್ಲಿ ತಿಳಿಯೋಣ .
E135 · 11 Jul 2021 · 9 min
ಕಥೆಯ ಶೀರ್ಷಿಕೆ ವಿಚಿತ್ರ ಅನ್ನಿಸುತ್ತಾ ? ಹೌದು .. ರಾಮಾಯಣದ ಈ ಅಪರೂಪದ ಕತೆ ಕೇಳೋಕೆ ಬಹು ಮಜಾ . ಜತೆಗೆ , ಹನುಮಂತ ಹಾಗೂ ರಾಮನ ಗೆಳೆತನ ಎಷ್ಟು ಗಾಢವಾಗಿತ್ತು ಅನ್ನುವುದಕ್ಕೆ ಸಾಕ್ಷಿ ಕೂಡ .
E134 · 4 Jul 2021 · 5 min
ಕಾಡಿನಲ್ಲಿ ವಾಸ ಆಗಿದ್ದ ಕಾಗೆ ಮರಿಗೆ ನೀರಿನಲ್ಲಿ ಈಜುತ್ತಿದ್ದ ಬೆಳ್ಳಗೆ ಸುಂದರವಾಗಿದ್ದ ಹಂಸವನ್ನ ಕಂಡಾಗ ಒಂಥರಾ ಅಸೂಯೆ ಆಯ್ತು . ಹಾಗೆ , ಸ್ವಲ್ಪ ಭಯ ಕೂಡ ಆಯ್ತು . ತಕ್ಷಣ ಅಮ್ಮನ ಬಳಿ ಹೋಗಿ , ಹೇಳಿದಾಗ , ಅಮ್ಮ ಹೇಳಿದ್ದೇನು ? ಆಗ ಕಾಗೆ ಮರಿಗೆ ಏನನ್ನಿಸಿತು ? ಸಂವಿತ್ ಫೌಂಡೇಶನ್ ಅವರ ಸಹಯೋಗದಲ್ಲಿ ಮಾಡಿದ ಈ ಪುಟ್ಟ ಕತೆ ಹೇಳುವ ನೀತಿ ಮಾತ್ರ ಬಹಳ ದೊಡ್ಡದು .
E133 · 27 Jun 2021 · 9 min
ಕಾಡಿನಲ್ಲಿ ಆನೆ ಮರಿ ಒಂದು ಹುಟ್ಟಿತು . ಎಲ್ಲ ರೀತಿಯಲ್ಲೂ ಬೇರೆ ಆನೆಗಳ ಥರಾನೇ ಇದ್ದ ಆನೆ ಮರಿ ನೋಡೋಕೆ ಮಾತ್ರ ನೀಲಿ ಬಣ್ಣ ಇತ್ತು !. ಆ ಬಣ್ಣದ ಜತೆ ಕಾಡಿನಲ್ಲಿ ಬೇರೆ ಮರಿಗಳ ಜತೆ ಬೇರೆಯೋಕೆ ಈ ಆನೆ ಮರಿಗೆ ಸಾಧ್ಯ ಆಯಿತೇ ?