Season 1, Episode 85 · SatisHFaction Kannada Podcast from the US
ಭಯ ಮತ್ತು ಸೈಕಾಲಜಿಕಲ್ ಸೇಫ಼್ಟಿ (Innovation)
29 Oct 2025 · 13 min
Episode notes
ಭಯ ಮತ್ತು ಸೈಕಾಲಜಿಕಲ್ ಸೇಫ಼್ಟಿ ಕಳೆದ ತಿಂಗಳು (ಸೆಪ್ಟೆಂಬರ್ 19) ಪ್ರೆಸಿಡೆಂಟ್ ಟ್ರಂಪ್ H1B ವೀಸಾಕ್ಕೆ ಸಂಬಂಧಿಸಿದ ರಿಸ್ಟ್ರಿಕ್ಷನ್‌ಗಳನ್ನು ಅಳವಡಿಸಿದಾಗ, ಮೈನ್‌ಸ್ಟ್ರೀಮ್ ಅಮೇರಿಕದ ವೃತ್ತಪತ್ರಿಕೆಗಳಲ್ಲಿ ಈ ನಿಲುವಿಗೆ ಪೂರಕವಾಗಿ ಅನೇಕ ದನಿಗಳು ಎದ್ದಿದ್ದವು. ಹಾಗೇ ಜನರ ಬೆಂಬಲ ಕೂಡ ವ್ಯಕ್ತವಾಗಿತ್ತು. ಹೀಗೆ, ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಓದಿಕೊಂಡು ಬಂದ ಒಂದು ಲೇಖನಕ್ಕೆ ಉತ್ತರವೆಂಬಂತೆ ಒಂದಿಷ್ಟು ಜನರು ಕಾಮೆಂಟ್ ಹಾಕಿದ್ದರು. ಅದರಲ್ಲೊಬ್ಬರು, ಭಾರತದಂತಹ ದೇಶಗಳು ಅಷ್ಟೊಂದು ಇಂಜಿನಿಯರುಗಳನ್ನು ಹುಟ್ಟು ಹಾಕುವುದೇ ಹೌದಾದರೆ, ಆ ದೇಶದಲ್ಲಿ ಅಷ್ಟೊಂದು ಇನ್ನೋವೇಷನ್ ಏಕೆ ಇನ್ನೂ ಹುಟ್ಟೋದಿಲ್ಲ ಎನ್ನೋ ರೀತಿಯಲ್ಲಿ ಅನಿಸಿಕೆ ಬರೆದಿದ್ದರು. ನಮ್ಮಲ್ಲಿ ಉತ್ಪಾದನೆಗೊಳ್ಳುವ ಗ್ರಾಜುಯೇಟುಗಳು, ಇಂಜಿನಿಯರುಗಳನ್ನು ನಾವು ಸಮರ್ಪಕವಾಗಿ…
Podcast
SatisHFaction Kannada Podcast from the US
Satish Hosanagara · Society & Culture · Kannada
The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community. #NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.
More from SatisHFaction Kannada Podcast from the US All episodes →
-
30 Dec 2025 · 12 min
Season 1 Final Episode (88)
Season 1 Final Episode (88) ಸ್ಯಾಟಿಸ್‌ಫ಼್ಯಾಕ್ಷನ್‌ನಿಂದ ನಾನು ಕಲಿತ ಪಾಠ! ಯಾವುದೋ ಒಂದು ಕಾಲದಲ್ಲಿ ಶುರು ಮಾಡಬೇಕಾಗಿದ್ದ ಪಾಡ್‌ಕ್ಯಾಸ್ಟ್ ಅನ್ನು ನಾನು ಶುರು ಮಾಡಿದ್ದು, 2025 ರ ಜನವರಿಯಲ್ಲಿ. ಈ ಪಾಡ್‌ಕ್ಯಾಸ್ಟ್ ಅಂದ್ರೆ ಅದು ಒಂದು ಥರದ expression ಅಷ್ಟೇನೆ. ನಮ್ಮ ನಮ್ಮ ಸಂತೋಷವನ್ನು ಅರಿಸಿ ಹೇಗೆ ನಾವು content ಹುಡುಕಿಕೊಂಡು ಹೋಗ್ತೀವಲ್ಲ. ಹಾಗೇ! ಇದೂ ಕೂಡ ನಮ್ಮ ನಮ್ಮ ದೈನಂದಿನ ಅಗತ್ಯಗಳಲ್ಲಿ ಒಂದು ಅನ್ನಬೇಕು ಅಷ್ಟೇ. Total episodes 88. Ordent fans (listeners) about 25-30 Most of the audience are from USA and India, listeners from Canada, Brazil and UK are about 2%. but I do thank the people from 26 other countries, who are around 1% of the audience.…
-
S1 · E87 · 17 Dec 2025 · 12 min
Getting used to AI Agents!
Getting used to AI Agents! ಇದ್ದಕ್ಕಿದ್ದ ಹಾಗೆ ನಮ್ಮ ಮನೆ ಮಾರ್ಗೇಜ್ ಕಂಪನಿಯವರಿಂದ ಒಂದು ಇ-ಮೇಲ್ ಬಂತು. ಅದರಲ್ಲಿ, ಈಗ ನೀವು home insurance ಕೊಡ್ತಾ ಇರೋದು ಬಹಳ ಹೆಚ್ಚಿದೆ. ನಾವು ಒಬ್ಬ ಪಾರ್ಟ್‌ನರ್ ಜೊತೆಗೆ ಸೇರಿ ಅದನ್ನ ಕಡಿಮೆ ಮಾಡಿಸ್ತಾ ಇದ್ದೇವೆ. ಇಲ್ಲಿ ಕ್ಲಿಕ್ ಮಾಡಿ ಅಂತ ಇತ್ತು. ಸ್ಪಾಮ್ ಅಲ್ಲ, ಫ಼ಿಶಿಂಗ್ ಅಲ್ಲ ಅಂತ ಕನ್‌ಫ಼ರ್ಮ್ ಮಾಡ್ಕೊಂಡು ನೋಡಿದ್ರೆ. ವೆರಿಫ಼ಿಕೇಶನ್‌ಗೆ ನಿಮ್ಮ ಫ಼ೋನ್ ನಂಬರ್ ಕೊಡಿ... ಅಂತ ಒಂದು ಗಾಳ ಇಟ್ಟಿದ್ದ್ರು. ಆಗ ನನಗೆ ಅನ್ನಿಸ್ತು, ಇದು ಎಲ್ಲಿಗೆ ಹೋಗ್ತಾ ಇದೆ ಅಂತ. ಆದದ್ದಾಗಲಿ, ಫ಼ೋನ್ ನಂಬರ್ ಹಾಕಿ ನೋಡೋಣ ಅಂದುಕೊಂಡ್ರೆ, ಅಲ್ಲಿ ಆಗಿದ್ದೇ ಬೇರೆ....
-
S1 · E86 · 26 Nov 2025 · 10 min
ಎಷ್ಟು ದುಡ್ಡು ಇದ್ರೆ ಒಳ್ಳೇದು? (86)
ಎಷ್ಟು ದುಡ್ಡು ಇದ್ರೆ ಒಳ್ಳೇದು? ಈಗೆಲ್ಲ ಅಮೇರಿಕದಲ್ಲಿ ದೊಡ್ಡ ದೊಡ್ಡ ಕಂಪನಿಗಳು, ಕಾಸ್ಟ್ ಕಟ್ಟಿಂಗ್ ಅನ್ನೋ ಹೆಸರಿನಲ್ಲಿ ಸಾವಿರಾರು ಜನರನ್ನು ಮನೆಗೆ ಕಳಿಸೋದನ್ನ ನೋಡಿದ್ರೆ, ಅಮೇರಿಕದ ಎಂಪ್ಲಾಯ್‌ಮೆಂಟ್ ಸಿಚುವೇಶನ್ ಬದಲಾಗುತ್ತೋ ಇಲ್ಲವೋ ಅನ್ನೋ ಸಂಶಯ ಬರುತ್ತೆ. ನಮ್ಮ ಕಂಪನಿ ಒಂದರಲ್ಲೇ ಸುಮಾರು 13 ಸಾವಿರ ಜನರು ಒಂದೇ ಕಳೆದುಕೊಳ್ಳಬೇಕಾಗಿ ಬಂದಾಗ ಅವರನ್ನೆಲ್ಲ ನೆನೆದು ಒಂದು ಸರತಿ ಕರುಳು ಚುರುಕು ಅಂತು. ಮತ್ತೆ ಮರುಕ್ಷಣ, ಇದೆಲ್ಲ ಕ್ಯಾಪಿಟಲಿಸಮ್ಮಿನ ಲೀಲೆ. ಇಲ್ಲಿ ಯಾರೂ ಯಾವತ್ತೂ ಶಾಶ್ವತರಲ್ಲ, ಯಾರು indispensible ಅಲ್ಲ, ಅನ್ನೋ ಮಾತು ಕೂಡಾ ನೆನಪಿಗೆ ಬಂತು. ಕೆಲಸ ಕಳೆದುಕೊಂಡವರಿಗೆ, ಆಯಾ ಕಂಪನಿಗಳಲ್ಲಿ, ಅವರವರ ಸರ್ವೀಸಿಗೆ ಸಂಬಂಧ ಪಟ್ಟಂತೆ ಒಂದಿಷ್ಟು severence ಬರುತ್ತೆ. ಆದ್ರೆ, ಎಲ್ಲ ಕಂಪನಿಗಳಲ್ಲೂ ಹಾಗೇ ಬರುತ್ತೆ ಅಂತ…
-
S1 · E85 · 18 Nov 2025 · 11 min
ಕೆಲಸ: ಕ್ಯಾಪಿಟಲಿಸ್ಟಿಕ್ ಪ್ರಪಂಚದ ಭೂತ
ಕೆಲಸ ಎಂಬ ಕ್ಯಾಪಿಟಲಿಸ್ಟಿಕ್ ಪ್ರಪಂಚದ ಭೂತ ನಮ್ಮ ಮನೆ ಹತ್ರ ಇರೋ ಒಬ್ಬ ಕಾರ್ ಮೆಕ್ಯಾನಿಕ್ ಹತ್ರ ಮಾತಾಡ್ತಾ ಇದ್ದೆ. ಪರಿಚಯ ಮಾಡಿಕೊಳ್ಳುತ್ತಾ ನೀನು ಎಲ್ಲಿ ಕೆಲ್ಸ ಮಾಡ್ತೀಯಾ, ಹೇಗೆ ಅಂತ ಕೇಳಿದ. ಅದಕ್ಕೆ ನಾನು ಟೆಕ್ನಾಲಜಿಯಲ್ಲಿ ಒಂದು ದೊಡ್ಡ ಕಂಪನಿಯಲ್ಲಿ ಕೆಲ್ಸ ಮಾಡ್ತೀನಿ ಅಂತ ಅಂದ್ರೆ. ಅವನು, ಇತ್ತೀಚೆಗೆ ಮಾಸ್ ಲೇ ಆಫ಼್ ಆಗಿರೋ ನ್ಯೂಸ್ ಅನ್ನು ಕೋಟ್ ಮಾಡಿ, ಅದು ಹೇಗೆ ಕೆಲ್ಸ ಮಾಡ್ತೀರೋ? ಅಂತ ಆಶ್ಚರ್ಯ ವ್ಯಕ್ತ ಪಡಿಸಿದ. ನನಗೆ ಆಗಲೇ ಅನ್ನಿಸಿದ್ದು, ಹೌದು, ನಮ್ಮ ಕೆಲಸ ಇದೆ/ಇಲ್ಲ ಎನ್ನುವ ಯಾವ ಗ್ಯಾರಂಟಿ ಅಂತೂ ಇಲ್ಲ.
-
S1 · E86 · 8 Nov 2025 · 10 min
ನಮ್ಮ (ನಮ್ಮ) ಭಾಷೆ ನಮ್ಮದು! (86)
Global Language Landscape Total living languages : 7,164 (Ethnologue, 2025) Languages with writing systems : 3,661 — These are considered “full-fledged” for reading, writing, and speaking. Languages without writing systems : 719 — These are oral languages used only in speech. Uncertain writing status : 2,586 — These may be partially documented or used in limited literacy contexts. This diversity reflects not just linguistic complexity but also cultural, geographic, and historical factors. Philosophical Reflection Language isn’t just a tool—it’s a mirror of human consciousness. The…
-
S1 · E83 · 22 Oct 2025 · 10 min
ನಮ್ಮ ದೀಪಾವಳಿಯ ಆಚರಣೆ (84)
ನಮ್ಮ ದೀಪಾವಳಿಯ ಆಚರಣೆ ಒಂದು ಕಾಲದಲ್ಲಿ ನರಕಚತುರ್ದಶಿಯ ದಿನ ಬೆಳಗ್ಗೆ ಬೇಗ ಎದ್ದು, ಚುಮು ಚುಮು ಚಳಿಯಲ್ಲೇ ಕಾಸಿದ ಎಣ್ಣೆಯ ಲೇಪನದ ನಂತರ ಅಭ್ಯಂಜನ ಸ್ನಾನ ಮಾಡಿ, ನಂತರ ಆಟೋಟಗಳಲ್ಲಿ ಮೊದಲಾಗುತ್ತಿದ್ದ ದಿನಗಳು ಈಗಂತೂ ಇಲ್ಲ. ಆಗೆಲ್ಲ ಚಳಿಗೆ ಬೈದುಕೊಂಡಿದ್ದರ ದೆಸೆಯಿಂದಲೋ ಏನೋ ಇಂದು ಚಳಿದೇಶದಲ್ಲಿ ಬಂದು ನೆಲೆಸುವಂತಾಗಿದೆ. ಎಂತಹ ಗಮ್ಮತ್ತು ಇರ್ತಾ ಇತ್ತು ಆಗೆಲ್ಲ? ದೀಪಾವಳಿ ದಿನಗಳಲ್ಲಿ ಪುಂಡಿ ಕೋಲಿನ ಆಟ ಆಡ್ತಿದ್ವಿ. ಬೂರೆ ಕದಿಯೋದಕ್ಕೆ ಹೋಗ್ತಿದ್ವಿ. ಗೂಪೂಜೆ ಮಾಡುವುದರ ಜೊತೆಗೆ ದನಬೆದರಿಸೋ ಆಟಗಳನ್ನು ದೂರದಿಂದ ಕುತೂಹಲ ಮತ್ತು ಜಾಗರೂಕತೆಯೊಂದಿಗೆ ನೋಡ್ತಾ ಇದ್ವಿ. ಲಕ್ಷ್ಮೀ ಪೂಜೆ ದಿನ ಅಂಗಡಿ, ಮಿಲ್ಲು, ಮತ್ತೊಂದು ಅಂತ ಹೋದಲ್ಲೆಲ್ಲ ಸ್ವೀಟ್ಸ್, ಮಂಡಕ್ಕಿ, ಹಣ್ಣು ಕೊಡೋರು, ಅದನ್ನೆಲ್ಲ ಕಲೆಕ್ಟ್ ಮಾಡ್ತಾ ಇದ್ವಿ. ಪಟಾಕಿಗಳನ್ನ,…
-
S1 · E83 · 9 Oct 2025 · 10 min
ನಮ್ಮ ಮತ್ತು ಕನ್ನಡ ಸಿನಿಮಾ ನಂಟು
ನಮ್ಮ ಮತ್ತು ಕನ್ನಡ ಸಿನಿಮಾ ನಂಟು ನಮ್ಮ ಮತ್ತು ನಮ್ಮ ಕನ್ನಡ ಸಿನಿಮಾಗಳ ಬಾಂಧವ್ಯ ಹಲವಾರು ದಶಕಗಳ ವಿಸ್ತಾರವುಳ್ಳದ್ದು. ನಾವು ಒಂದು ಸಿನಿಮಾ ಅಥವಾ ಸೀರಿಯಲ್ ನೋಡ್ದಾಗ, ನಮಗೆ ಗೊತ್ತೋ ಗೊತ್ತಿಲ್ಲದೆಯೋ ಆಯಾ ಸಿನಿಮಾಗಳ ಕಲಾವಿದರ ನಡುವೆ ಒಂದು ಅವಿನಾಭಾವ ಸಂಬಂಧ ಬೆಳೆದುಕೊಳ್ಳುತ್ತೆ. ಈ ಒಂದು ಸಂಬಂಧ ಬಹಳ ವಿಶೇಷವಾದದ್ದು. ಆ ಕಾರಣದಿಂದ ನಮ್ಮ ಕನ್ನಡ (ನೇಟಿವ್) ಸಿನಿಮಾಗಳು ನಮಗೆ ಬಹಳ ಆಪ್ತವಾಗುತ್ತವೆ. ಈ ಕೆಳಗಿನ ಯಾವೊಬ್ಬ ಕಲಾವಿದರನ್ನು ನೀವು ನೆನಪಿಸಿಕೊಂಡರೂ ಸಾಕು ನಿಮಗೆ ಅವರ ಸಿನಿಮಾಗಳು, ಅವರ ಪರ್ಸನಾಲಿಟಿ ನೆನಪಿಗೆ ಬರೋದು ಸಹಜ: ಶನಿಮಹಾದೇವಪ್ಪ, ಟೈಗರ್ ಪ್ರಭಾಕರ್, ಕೆ.ಎಸ್. ಅಶ್ವಥ್, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಉಮಾಶ್ರೀ, ತಾರಾ, ಸುಂದರಕೃಷ್ಣ ಅರಸ್, ಪಂಡರೀಬಾಯಿ, ಇತ್ಯಾದಿ.
-
S1 · E82 · 4 Oct 2025 · 13 min
H1B ವೀಸಾ: ಕಥೆ ಮತ್ತು ವ್ಯಥೆ (82)
H1B ವೀಸಾ: ಕಥೆ ಮತ್ತು ವ್ಯಥೆ ಇತ್ತೀಚೆಗೆ ವೀಸಾ ಫ಼ೀ ಹೆಚ್ಚು ಮಾಡಿರೋ ವಿಷಯ: H1B ವೀಸಾ ಹೆಸರಿನಲ್ಲಿ ಬೋಟ್‌ಲೋಡ್‌ಗಟ್ಟಳೆ ಕ್ಯಾಂಡಿಡೇಟುಗಳನ್ನ ತಂದು ಇಲ್ಲಿ ದುಡ್ಡು ಮಾಡಿ ಮೆರೀತಾ ಇದ್ರಲ್ಲ ಅವರಿಾಗೆ ಬುದ್ಧಿ ಕಲಿಸೋ ಉಪಾಯನೋ? ಅಥವಾ ಇದರ ಹಿಂದೆ ಇನ್ನೇನಾದ್ರೂ ಕಾರಣ ಇದೆಯಾ? What do the mainstream Americans say about this? What does the Indian community say and react to this? Was this visa misused? How People Took Advantage: Legally and Otherwise The H-1B became a gateway to permanent residency for many skilled workers. Its “dual intent” provision allowed holders to apply for green cards while working in the U.S.. Over time, however, the…
-
S1 · E80 · 19 Sep 2025 · 13 min
ನಮ್ಮೊಳಗಿನ ಸೃಜನಶೀಲತೆ (Creativity)
ನಮ್ಮೊಳಗಿನ ಸೃಜನಶೀಲತೆ (Creativity) ನಮ್ಮೊಳಗೆ ಹೇಗೆ ಒಂದೊಂದು creative idea ಗಳು ಹುಟ್ಟುತ್ವೆ? ಆ ಆಲೋಚನೆಗಳು ಹೇಗೆ ಹರಳು ಕಟ್ಟುತ್ವೆ? ಆ ಹರಳು ಮುಂದೆ ಹೇಗೆ ಬೆಳೆದು, ಒಂದು ಸ್ಫುಟವಾದ ರೂಪ ಪಡೆಯೋದು ಹೇಗೆ? ಒಂದು ಚಿಕ್ಕ ಐಡಿಯಾ ದೊಡ್ಡದಾಗಿ ಹೇಗೆ ಬೆಳೆಯೋದು? ಈ ಐಡಿಯಾಗಳಿಗೆ ಯಾವುದಾದರೂ catalysts (positive or negative) ಇವೆಯಾ? How does the creative mind filter through the idea? What lens is being used? Today's episode discusses the creative thought process and how it becomes big or no longer exists. What are some of the avenues of inspiration? -Personal experience: life events, emotions, relationships -Observation: noticing everyday…
-
S1 · E80 · 6 Sep 2025 · 10 min
ಆಫ಼್ರಿಕಾದ ಬವಣೆ ಮತ್ತು ಬದಲಾವಣೆ (80)
ಆಫ಼್ರಿಕಾದ ಬವಣೆ ಮತ್ತು ಬದಲಾವಣೆ ಒಂದಾನೊಂದು ಕಾಲದಲ್ಲಿ ಮಾನವತೆಯ ಮೂಲವಾಗಿ ಬಿಂಬಿತವಾಗಿದ್ದ ಆಫ಼್ರಿಕ ಎನ್ನೋ ಖಂಡ, ಇಂದು ಬಹಳ ಸಂಕಷ್ಟದಲ್ಲಿದೆ. ಸುಡಾನ್ ನಲ್ಲಿ ಆಗಸ್ಟ್ 31ರಂದು ಮಡ್‌ಸ್ಲೈಡ್ ಆದ ಕಾರಣದಿಂದ ಸುಮಾರು ಸಾವಿರ ಜನರು ಕಾಣೆಯಾದರು, ಆದರೆ ಅದು ಅಷ್ಟು ದೊಡ್ಡ ಸುದ್ದಿ ಮಾಡಲಿಲ್ಲ. ಆದರೆ, ಯುಕ್ರೇನ್‌ನಲ್ಲಿ ಹತ್ತು ಜನ ಸತ್ರೆ, ಅದು ಇಲ್ಲಿನ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗುತ್ತೆ. ಹಾಗೇ, ಈ ವಾರದ ಅಫ಼ಘಾನಿಸ್ತಾನದ ಭೂಕಂಪದಲ್ಲಿ ಸಾವಿಗೀಡಾದ ನೂರಾರು ಜನರ ಬಗ್ಗೆ ಸುದ್ದಿ ಆಯ್ತು. ಜನರ ಜೀವ ಮತ್ತು ಆ ಜೀವಕ್ಕೆ ಎಲ್ಲ ಕಡೆಗೆ ಒಂದೇ ರೀತಿಯ ಬೆಲೆ ಇಲ್ಲದಿರುವುದೇಕೆ? ಒಂದು ಕಾಲದಲ್ಲಿ, craddle of humanity ಯಾಗಿ ಇದ್ದಂತಹ ಆಫ಼್ರಿಕ, ಇಂದು ಅನೇಕ ಕಾರಣಗಳಿಂದ ಬಳಲುತ್ತಿರುವುದೇಕೆ? The journey outwards of Africa…
